ಶರಣ ಆದಯ್ಯನ ವಚನ aadayya vachana

ಶರಣ ಆದಯ್ಯನ ವಚನ aadayya vachana
  • Android 4.1 Android
  • Version: 2.0
  • 2 MB
Download

Updated to version 2.0!


app Name ಶರಣ ಆದಯ್ಯನ ವಚನ aadayya vachana
Version 2.0
Developer Vishaya Kannada
OS Android 4.1
Updated 2024-03-02

Download ಶರಣ ಆದಯ್ಯನ ವಚನ aadayya vachana app Android

ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collection
ಆದಯ್ಯ ೧೧ನೇ ಶತಮಾನದ ಉತ್ತರಾರ್ಧ ಮತ್ತು ೧೨ನೇ ಶತಮಾನದಲ್ಲಿದ್ದ ಸೌರಾಷ್ಟ್ರ ಪ್ರಾಂತ್ಯದಲ್ಲಿದ್ದ ಹಿರಿಯ ಶಿವಶರಣರು, ವಚನಕಾರರು. ಜೇಡರದಾಸಿಮಯ್ಯ ಮತ್ತು ಗುರುಬಸವಣ್ಣನವರ ಸಮಕಾಲೀನರು. ಇವರ ವಚನಗಳಲ್ಲಿ ಅಂದು ಪ್ರಚಲಿತ-ಅಪ್ರಚಲಿತರಾಗಿದ್ದ ವಚನಕಾರರೆಲ್ಲರ ಹೆಸರು ಉಲ್ಲೇಖ ಗೊಂಡಿರುವುದನ್ನು ಪರಿಶೀಲಿಸಬಹುದಾಗಿದೆ. ಈ ಶರಣರ ಪುಣ್ಯಸ್ತ್ರೀಯ ಹೆಸರು ಪದ್ಮಾವತಿ. ಇವರ ವಚನಗಳ ಅಂಕಿತ ಸೌರಾಷ್ಟ್ರ ಸೋಮೇಶ್ವರ. ಈತ ಮೂಲತಃ ಸೌರಾಷ್ಟ್ರಕ್ಕೆ ಅಂದರೆ ಗುಜರಾತಿಗೆ ಸೇರಿದವರು. ಆತ ಪುಲಿಗೆರೆಗೆ ಅಂದರೆ ಇಂದಿನ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿ ವ್ಯಾಪಾರ ವಹಿವಾಟನ್ನು ಆರಂಭಿಸುತ್ತಾರೆ. ಆಗ ಅಲ್ಲಿ ಅವರಿಗೆ ಪದ್ಮಾವತಿ ಎಂಬ ಜೈನ ಕನ್ಯೆಯ ಪರಿಚಯವಾಗುತ್ತದೆ. ಆಕೆಯನ್ನು ಪ್ರೀತಿಸಿ ಮದುವೆಯಾಗಲು ಮುಂದಾಗುತ್ತಾರೆ. ಈ ಮದುವೆಗೆ ಪದ್ಮಾವತಿಯ ತಂದೆ ಒಪ್ಪದಿದ್ದಾಗ ವಾದಕ್ಕೆ ನಿಂತು ಸೌರಾಷ್ಟ್ರದಿಂದ ಸೋಮೇಶ್ವರನನ್ನು ತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿ ತಾನೊಬ್ಬ ನಿಜ ಶಿವ ಭಕ್ತನೆಂದು ತೋರಿಸುತ್ತಾರೆಂದು ಅದಯ್ಯನ ರಗಳೆ, ಸೋಮನಾಥ ಚಾರಿತ್ರ ಮೊದಲಾದ ಕಾವ್ಯಗಳಿಂದ ತಿಳಿದುಬರುತ್ತದೆ. ಕಲ್ಯಾಣದ ಅನುಭವ ಮಂಟಪದ ವಚನಗಳ ಧ್ವನಿ ಎಲ್ಲೆಡೆ ಹರಡಿಕೊಂಡು ಅದರ ಪರಿಮಳ ಲಕ್ಷ್ಮೇಶ್ವರಕ್ಕೂ ವ್ಯಾಪಿಸಿತು. ತನ್ನ ವ್ಯವಹಾರದಲ್ಲಿ ಮುಳುಗಿದ್ದ ಆದಯ್ಯನವರಿಗೆ ಆಧ್ಯಾತ್ಮಿಕ ಜೀವನದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ ಒಂದೊಮ್ಮೆ ಆದಯ್ಯನವರು ವ್ಯಾಪಾರಕ್ಕಾಗಿ ಕಳಚೂರ್ಯರ ಕಲ್ಯಾಣಕ್ಕೆ ಹೋದಾಗ ಅಲ್ಲಿ ಶರಣರ ಸಂಪರ್ಕದಿಂದ ಅವರ ಅನುಭಾವದತ್ತ ಆಕರ್ಷಿತನಾಗುತ್ತಾರೆ. ಅವರ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ತಾವೂ ಶರಣನಾಗುವ ಉತ್ಕಟ ಬಯಕೆಯಿಂದ ಅಲ್ಲಿ ಕೆಲ ಕಾಲ ನಿಲ್ಲುತ್ತಾರೆ. ಬಸವಣ್ಣನವರಿಂದ, ಶರಣರಿಂದ ಲಿಂಗದ ಮಹಿಮೆ ಮತ್ತು ತತ್ವ ತಿಳಿದು ಲಿಂಗಾಯತ ಧರ್ಮ ಸ್ವೀಕರಿಸುತ್ತಾರೆ. ಬನಿಯಾ ಅಥವಾ ಬಣಜಿಗರಾದ ಆದಯ್ಯ ಲಿಂಗಾಯತರಾದ ಮೇಲೆ ಸತ್ಯ ಶುದ್ಧವಾದ ಕಾಯಕ ಮಾಡುತ್ತಾ ಶರಣರ ಅನುಭಾವವನ್ನು ಜನರಿಗೆ ಪರಿಚಯಿಸುತ್ತ, ತಮ್ಮಂತೆ ಅನೇಕ ಬನಿಯಾ-( ಇವರು ವೈಶ್ಯರಲ್ಲ, ಆದರೆ ವ್ಯಾಪಾರಿಗಳು- ಇದರಲ್ಲಿ ಬಹುತೇಕರು ಜೈನರು) ವ್ಯಾಪಾರಿಗಳನ್ನು ಲಿಂಗಾಯತ ಧರ್ಮಕ್ಕೆ ಸೇರಲು ಪ್ರೇರೇಪಿಸುತ್ತಾರೆ. ಇವರಲ್ಲಿ ಜೈನರೇ ಅಧಿಕವಾಗಿದ್ದರು. \n ಆದಯ್ಯನವರು ಬಣಜಿಗರಾಗಿ, ಜೈನ ಕನ್ಯೆಯನ್ನು ಮದುವೆಯಾಗಿ, ಮುಂದೆ ಜೈನ ಬಸದಿಯಲ್ಲಿಯೇ ಸೋಮನಾಥನ ವಿಗ್ರಹ ಸ್ಥಾಪಿಸುತ್ತಾರೆ. ತನ್ನ ಮಾತೃಭಾಷೆ ಗುಜರಾತ್ ಮರೆತು, ಕನ್ನಡ ಕಲಿತು, ಅದರಲ್ಲಿಯೇ ವಚನಗಳನ್ನು ರಚಿಸಿ, ಶರಣ ವಚನಕಾರನಾಗಿ ಹೊಮ್ಮುತ್ತಾನೆ. ಅನಂತರ ಶರಣರ ಸಂಪರ್ಕದಲ್ಲಿ ಬಂದು ಬಹು ದೊಡ್ಡ ವಚನಕಾರರಾದಾಗ ತಮ್ಮ ಕಾಯಕದ ನಂತರ ಪ್ರತಿನಿತ್ಯ ಇದೇ ಸೋಮನಾಥ ದೇವಾಲಯದಲ್ಲಿ ಬಂದು ಕುಳಿತು ವಚನಗಳನ್ನು ಬರೆಯುತ್ತಿರುತ್ತಾರೆ. ಇದೇ ಬಸದಿ ಅಥವಾ ಮಂದಿರದಲ್ಲಿ ಅನುಭಾವ ಪಡೆಯುತ್ತಾರೆ. ಈ ಸೋಮನಾಥ ದೇವಸ್ಥಾನದ ಪಕ್ಕದಲ್ಲಿಯೇ ಒಂದು ಪುಟ್ಟ ಗುಡಿಯಿದೆ, ಅದುವೇ ಶ್ರೇಷ್ಠ ಅನುಭಾವಿ ಆದಯ್ಯನವರ ಸಮಾಧಿ. ಕಾಲ ಕ್ರಿ, ಶ. ೧೧೬೫. ’ಸೌರಾಷ್ಟ್ರ ಸೋಮೇಶ್ವರ’ ಅಂಕಿತದಲ್ಲಿ ವಚನ ಮತ್ತು ಸ್ವರವಚನಗಳನ್ನು ರಚಿಸಿದ್ಧಾನೆ. ೪೦೩ ವಚನಗಳು ದೊರೆತಿವೆ. ಶರಣ ಧರ್ಮ ತತ್ವಗಳ ವಿವೇಚನೆ ಅವುಗಳಲ್ಲಿ ವ್ಯಾಪಕವಾಗಿ ನಡೆದಿದೆ. ಸಾಹಿತ್ಯಿಕ ಸತ್ವ, ತಾತ್ವಿಕ ಪ್ರೌಢಿಮೆ ಎರಡೂ ಈತನ ವಚನಗಳಲ್ಲಿ ಮೇಳೈಸಿರುವುದು ವಿಶೇಷವೆನಿಸಿದೆ. ಇವನ ವಚನಗಳ ಮೇಲೆ ಬಸವಣ್ಣ – ಅಲ್ಲಮರ ಪ್ರಭಾವ ವಿಶೇಷವಾಗಿ ಆಗಿದೆ. ಶರಣ ಚಳುವಳಿಯ ಪ್ರಮುಖರಲ್ಲಿ ಆದಯ್ಯ ಒಬ್ಬ, ಶೈವಪ್ರಭೇದಗಳನ್ನು ಹೇಳಿ ಲಿಂಗಾಯತದ ವೈಶಿಷ್ಟ್ಯವನ್ನು ಚೆನ್ನಾಗಿ ತಿಳಿಯಪಡಿಸಿರುವನು, `ವೇದಗಳ ಹಿಂದೆ ಹರಿಯದಿರು ಎಂದು ಹೇಳುವ ಮೂಲಕ ಶರಣಧರ್ಮಕ್ಕೆ ಹೆಚ್ಚಿನ ಒತ್ತುಕೊಡುವನು. ಬೆಡಗಿನ ವಚನಗಳು ಸಾಕಷ್ಟು ಬಳಕೆಗೊಂಡಿವೆ.
For any issues / concerns / feedback please reach out to us at [email protected] OR contact form in https://vishaya.in
  • 4
4 (620518)
Additional Information:
  • Updated
  • Price$0
  • Installs 10+
  • Rated for 12+ years
Good speed and no viruses!

On our site you can easily download All Apps And Games without registration and send SMS!